ಈ ಲೇಖನದಲ್ಲಿ ಗಮನಸೆಳೆವ ಬಹುಮುಖ್ಯ ಅಂಶ
ಇತ್ತೀಚೆಗೆ ಮಾಹಿತಿ ಹಕ್ಕು ಕಾಯಿದೆ ಅನ್ವಯ ಕೇಂದ್ರ ಸರ್ಕಾರದ ಆಧೀನದಲ್ಲಿರುವ ಭಾರತೀಯ ಭಾಷಾ ಇಲಾಖೆಗೆ ಪತ್ರ ಬರೆದಾಗ ಅವರಿಂದ ಬಂದ ಉತ್ತರ "ನಮ್ಮ ದೇಶಕ್ಕೆ ರಾಷ್ಟ್ರ ಭಾಷೆ ಎಂಬುದಿಲ್ಲ, ಇರುವುದೇನಿದ್ದರೂ ಅಧಿಕೃತ ಭಾಷೆ" - ಹೀಗೆ ಮೇಲಿನ ವಿವರಣೆಯನ್ನು ಪುಷ್ಠೀಕರಿಸಿದರು. ಯಾರಿಗಾದರು ಇನ್ನೂ ಇದರ ಬಗ್ಗೆ ಸಂದೇಹವಿದ್ದರೆ RTI ಕೆಳಗೆ ಕೇಂದ್ರಕ್ಕೆ ಒಂದು ಪತ್ರ ಬರೆದು ತಿಳಿದುಕೊಳ್ಳಬಹುದಾಗಿದೆ
ಹೌದು, ಇಂದು ಮಾಹಿತಿ ಹಕ್ಕು ಕಾಯಿದೆ (RTI) ಪ್ರಬಲವಾದ 'ಅರಿವಿನ ಅಸ್ತ್ರ' ವಾಗಿ ಹೊರ ಹೊಮ್ಮಿರುವುದನ್ನು ನಾವೆಲ್ಲರೂ ಅರಿಯಬೇಕಿದೆ. ಇಂದು ಅನೇಕರು, ವೈಯುಕ್ತಿಕವಾಗಿ ಅಥವ ಸಂಘಟಿತರಾಗಿ ಈ ಕಾಯಿದೆಯನ್ನು ಚಲಾಯಿಸುತ್ತ ಸಮಾಜದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ನಾವು ಜವಾಬ್ದಾರಿಯುತ-ನೆಮ್ಮದಿ-ಹೊಂದಾಣಿಕೆ-ಹೊಣೆಗಾರಿಕೆ-ಗುಣಮಟ್ಟದ ಜೀವನ ನಡೆಸಲು ನಮಗೆ ಲಭ್ಯವಿರುವ ಮೂಲಭೂತ ಹಕ್ಕುಗಳಲ್ಲಿ ಈ ಮಾಹಿತಿ ಹಕ್ಕು ಸಹ ಒಂದಾಗಿದೆ. ನಮಗೆ ಲಭ್ಯವಾಗಬೇಕಾದ - ಮನವರಿಕೆಯಾಗಬೇಕಾದ ನಮ್ಮ ಹಕ್ಕಿನ ಬಗ್ಗೆ ಅನೇಕ ಗೊಂದಲಗಳಿರಬಹುದು. ಮಾಹಿತಿ ಹಕ್ಕು ಕಾಯಿದೆ ಈ ತೊಡಕುಗಳ ಪರಿಹಾರಕ್ಕೆ ಕ್ರಮಾವಳಿಯ ಹೆಚ್ಚೆಯಾಗಿದೆ.
ಹಿಂದಿ ನಮ್ಮ ರಾಷ್ಟ್ರ ಭಾಷೆಯೆ? ಎಂದು ನಮ್ಮಲ್ಲಿ ಅನೇಕರಿಗೆದುರಾಗುವ ಪ್ರಶ್ನೆಯಂತೆ, ಕರ್ನಾಟಕದಲ್ಲಿ ಗ್ರಾಹಕನಿಗೆ 'ಕನ್ನಡದಲ್ಲಿ ಗ್ರಾಹಕ ಸೇವೆ' ಅಡಿಯಲ್ಲಿ ನಮಗೆ,
ಬ್ಯಾಂಕು ಚೆಕ್ಕುಗಳನ್ನು ಕನ್ನಡದಲ್ಲಿ ಬರೆಯಬಹುದೆ?
ಬ್ಯಾಂಕ್ ಖಾತೆ ತೆರೆಯಲು - ಜೀವ ವಿಮೆ ಮಾಡಿಸುವಾಗ ಕನ್ನಡ ಅರ್ಜಿಯನ್ನು ಯಾಕೆ ವಿತರಿಸುತ್ತಿಲ್ಲ?
ಬೆಂಗಳೂರಿನ ಹೋಟಲ್ ತಿಂಡಿಪಟ್ಟಿ (ಮೆನು) ಕನ್ನಡದಲ್ಲಿ ಏಕಿಲ್ಲ?
ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘೋಷಣೆಗಳು ಕನ್ನಡದಲ್ಲಿ ಏಕೆ ಮೂಡುತ್ತಿಲ್ಲ?
ಸದರಿ ವರ್ಷವನ್ನು ಕರ್ನಾಟಕ ಸರ್ಕಾರ ಕನ್ನಡ ಅನುಷ್ಠಾನ ವರ್ಷವಾಗಿ ಹೇಳಿದೆ. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ನಗರ ಸಾರಿಗೆ ಯಾವ ಕಾರ್ಯಕ್ರಮ ಹಮ್ಮಿಕೊಂಡಿದೆ?
ಈ ಮೇಲಿನೆಲ್ಲವೂ ಅನುಷ್ಠಾನವಾಗುವುದಕ್ಕೆ ಯಾರು ಜವಾಬ್ದಾರರು? ಅವರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರ?
ಹೀಗೆ ಪಟ್ಟಿ ಮಾಡ ಬಹುದಾದ ನೂರಾರು ಪ್ರಶ್ನೆಗಳಿರಬಹುದು.
ಈ ಕಾಯಿದೆ ಉಪಯೋಗಿಸಿ, ಈ ಮೇಲಿನವು ಮತ್ತು ಹೀಗೆ ಕರ್ನಾಟಕದಲ್ಲಿ ಕನ್ನಡ ಅನುಷ್ಠಾನ ಕುರಿತಾಗಿ ಲಭ್ಯವಿರುವ {ಅನುಷ್ಠಾನಕ್ಕೊಳಗಾಗದ!}ಕಾನೂನು-ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗಳನ್ನು ಪ್ರಶ್ನಿಸಿ, ದೊರಕುವ ಉತ್ತರಗಳಿಂದ ಕ್ರಮಬದ್ಧವಾದ ಪರಿಹಾರ ರೂಪಿಸಿಕೊಳ್ಳಬಹುದಾಗಿದೆ.
ನಮ್ಮ ಅರಿವನ್ನು ಇಮ್ಮಡಿಗೊಳಿಸಲು, ನಮಗೆ ದೊರಕುತ್ತಿರುವ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ನಮ್ಮ ಪ್ರಜಾಸತ್ತೆ ಒದಗಿಸಿರುವ ಈ ಅನುಕೂಲವನ್ನು ಚಲಾಯಿಸುವುದು ಸಾರ್ವಜನಿಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ.
*****
2 comments:
ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘೋಷಣೆಗಳು ಕನ್ನಡದಲ್ಲಿ ಏಕೆ ಮೂಡುತ್ತಿಲ್ಲ?
Utthara:neevu keliddu sari ide..1du reetili!!!!
Aadare,vimanayanakke baruvvaru mathu hoguvvaru kannadigaru thumba kammi sir....
bere deshadinda baruvvarige kannada barolla annodu thamagu gothiruva vichara!!!!!
idallade neevu kelida bere prashne galige nanna bembalavide sir!!!
Mu'd'uvam'te ma'd'abahudu. Idu saha' mahiti hakkinad'iyalli baruttade. Ya'radaru arji ha'kabe'ku as't'e!
Post a Comment