****
ಬರುವ ಅಕ್ಟೋಬರ್ ೧೩ ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಉಮೇದುವಾರರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನೆನ್ನೆಗೆ ಮುಗಿದಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಪ್ರಬಲವಾಗಿ ಬೇರೂರುವ ಲಕ್ಷಣ ತೋರುತ್ತಿರುವ ಪಕ್ಷವೊಂದನ್ನು ಹೊರತು ಪಡಿಸಿ! ಮಿಕ್ಕೆಲ್ಲಾ ಪಕ್ಷಗಳು, ಅದರ ಮುಖಂಡರು, ಅವರ ಸ್ಪರ್ಧಿಗಳಿಂದ ಅಲ್ಲಿನ ಎಲ್ಲಾ ಮತದಾರರನ್ನು (ಸ್ಥಳೀಯ ಮರಾಠರು ಮತ್ತು ಮರಾಠೇತರ ವಲಸಿಗರ) ಯಾವುದೇ ರೀತಿಯಲ್ಲಾದರೂ ಒಲಿಸಿಕೊಂಡು, ಹೇಗಾದರೂ ಮಾಡಿ ತಮ್ಮ ಪಕ್ಷಕ್ಕೆ ಮತ ಪಡೆದುಕೊಂಡು ಅಧಿಕಾರಕ್ಕೆ ಬರುವ ಕಸರತ್ತು ನಡೆದಿದೆ.
ಹೌದು, ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಮ.ನ.ಸೇ.) ಮಿಕ್ಕೆಲ್ಲಾ ಪಕ್ಷಗಳಿಗಿಂತ ಭಿನ್ನವಾಗಿ ಕೇವಲ ಸ್ಥಳೀಯ ಮರಾಠಿಗರು ಮತ್ತು ಅವರ ಮತಗಳ ಮೇಲೆ ಮಾತ್ರ ವಿಶ್ವಾಸವಿರಿಸಿ ಚುನಾವಣ ಕಣಕ್ಕಿಳಿದಿದೆ. ಬಹಳ ದಿನಗಳ ನಂತರ ರಾಜ್ ಠಾಕ್ರೆ, ರಾಷ್ಟ್ರೀಯ! ಇಂಗ್ಲೀಷ್ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಭಾಗ ೧ ಮತ್ತು ಭಾಗ ೨(ಸಂದರ್ಶಕ ಇಂಗ್ಲೀಷ್ ನಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಮರಾಠಿಯಲ್ಲೆ ಉತ್ತರಿಸುತ್ತ) ಮಾತನಾಡುತ್ತ ತಮ್ಮ ಪಕ್ಷ ಮತ್ತು ಅದರ ನಿಲವು ಹೇಗೆ ಸ್ಥಳೀಯತೆ ಮತ್ತು ಮರಾಠಿಗರ ಹಿತ ಚಿಂತನೆಗೆ ಮಾತ್ರ ಬದ್ಧವಾಗಿದೆಯೆಂಬುದನ್ನು ಖಡಾಖಂಡಿತವಾಗಿ ಸಮರ್ಥಿಸಿಕೊಂಡರು.
ಭಾಷಾವಾರು ಪ್ರಾಂತ್ಯವಾಗಿ ವಿಂಗಡನೆಯಾಗಿರುವ ಭಾರತದಲ್ಲಿ ಅನೇಕತೆಯಲ್ಲಿ ಏಕತೆ ಉಳಿಯಬೇಕಾದರೆ, ಭಾರತ ನಿಜವಾಗಿ ಸಬಲ-ಸದೃಡವಾಗಬೇಕಾದರೆ ಆಯಾ ಪ್ರಾಂತ್ಯಗಳು ಎಲ್ಲಾ ರೀತಿಯಲ್ಲಿ ಬಲಗೊಳ್ಳಬೇಕು. ಅಂತೆಯೇ ಮಹಾರಾಷ್ಟ್ರದಲ್ಲಿ ಸರ್ವ ರೀತಿಯಲ್ಲಿ ಮರಾಠತೆ ಸ್ಥಾಪಿತವಾಗಿ ಅದು ಮಹಾರಾಷ್ಟ್ರವಾಗಿ ಉಳಿಯುವುದೇ ನಿಜವಾದ ರಾಷ್ಟ್ರೀಯತೆ ಮತ್ತು ಭಾರತವೆಂಬ ಹಲವು ಸ್ವತಂತ್ರ್ಯ ಪ್ರಾಂತ್ಯಗಳನ್ನೊಳಗೊಂಡ ರಾಷ್ಟ್ರವನ್ನು ರಚಿಸಿರುವುದರಲ್ಲಿನ ಸಾರ್ಥಕತೆ ಹಾಗು ಆ ದೊಡ್ಡ ಶಕ್ತಿಯನ್ನು ಮತ್ತಷ್ಟು ಬಲ ಪಡಿಸುವ ಸಾಧನ ಎಂಬ ಸ್ಪಷ್ಟತೆ ಅವರ ಮಾತುಗಳಲ್ಲಿದೆ. ಅವರ ಮಾತುಗಳಲ್ಲಿ ಇತರರಂತೆ ಬೂಟಾಟಿಕೆಯ ರಾಷ್ಟ್ರೀಯತೆಯ ಪ್ರತಿಪಾದನೆಯಿಲ್ಲ. ಆ ರೀತಿ ಬೂಟಾಟಿಕೆ ಪ್ರತಿಪಾದನೆ ಮಾಡಿ ಓಟುಗಳನ್ನು ಪಡೆದು ಚುನಾವಣೆ ಗೆಲ್ಲುವ ಇರಾದೆ ಅವರ ಮಾತುಗಳಲ್ಲಿ ಕಾಣಸಿಗುವುದಿಲ್ಲ. ಮರಾಠಿ ಮತದ ಬಲ ಏನೆಂದು ಸಾಬೀತು ಮಾಡುವ ಛಲ ಅವರಿಂದ ಹೊರಹೊಮ್ಮಿರುವುದನ್ನು ಕಾಣಬಹುದಾಗಿದೆ.
ಒಂದು ರಾಜ್ಯದ-ಪ್ರದೇಶದ, ಆಗು-ಹೋಗುಗಳನ್ನು ನಿರ್ದರಿಸುವವರು ಅಲ್ಲಿಯ ಸ್ಥಳೀಯರಾಗಿರಬೇಕು, ಆದರೆ ಮಹಾರಾಷ್ಟ್ರ ರಾಜ್ಯ ಸರ್ಕಾರ ರಚಿಸಲು ಇಂದು ವಲಸಿಗರ ಮತಗಳು ನಿರ್ಣಾಯಕವಾಗುವ ಹಂತ ತಲುಪಿದೆ. ಕೆಲಸ, ವ್ಯಾಪಾರ ಮತ್ತೊಂದನ್ನು ಅರಸಿ ಬರುವ ವಲಸಿಗರು ಎಂದೆಂದಿಗೂ ವಲಸಿಗರಾಗೆ ಉಳಿಯುತ್ತಿರುವುದು ಸಮಸ್ಯೆ. ಪರಿಹಾರವಾಗಿ ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಬರುವವರಿಗೆ ರಹದಾರಿ ಪತ್ರ ಕ್ರಮ ಅನುಸರಿಸುವುದರ ಅವಶ್ಯಕತೆಯ ಬಗ್ಗೆ ಸಹ ರಾಜ್ ಮಾತನಾಡಿದ್ದಾರೆ. ಭಾರತದಿಂದ ಮಹಾರಾಷ್ಟ್ರ ಪ್ರತ್ಯೇಕವಾಗಬೇಕೆಂಬ ವಾದ ನಮ್ಮದಲ್ಲ, ಮಹಾರಾಷ್ಟ್ರದಲ್ಲಿ ಮರಾಠಾತತೆಗೆ ಪ್ರಾಧಾನ್ಯತೆ ದೊರಕಿಸುವ, ಮರಾಠಿಗರ ಹಕ್ಕಿನ ಪರವಾದ ಹೋರಾಟ ನಮ್ಮದು ಎಂಬುದು ರಾಜ್ ಮಾತುಗಳಲ್ಲಿ ಕೇಳಿಬರುತ್ತದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಗಣನೀಯವಾಗಿ ಮ.ನ.ಸೇ.ಯನ್ನು ಬೆಂಬಲಿಸಿರುವುದು ಈ ಮರಾಠಿ ಮತಗಳೆ ಎಂದು ರಾಜ್ ವಿಶ್ವಾಸದಿಂದ ಸಮರ್ಥಿಸಿಕೊಳ್ಳುತ್ತ, ನಮ್ಮ "ಮಹಾರಾಷ್ಟ್ರದಲ್ಲಿ ಮರಾಠತೆ" ಯಲ್ಲಿ ನಂಬಿಕೆಯಿಟ್ಟವರು, ವಲಸಿಗರಾಗಿದ್ದವರು ನೈಜ ರಾಷ್ಟ್ರೀಯತೆಯೆಂದರೆನೆಂದು ಅರಿತವರು ನನ್ನ ಪಕ್ಷಕ್ಕೆ ಮತ ಹಾಕುತ್ತಾರೆ ಮತ್ತು ಇಂತಹ ಮತಗಳು ಮಾತ್ರ ನನಗೆ ಸಾಕು ಎಂಬ ಎಂಬ ಅವರ ಆತ್ಮ ವಿಶ್ವಾಸದಿಂದ ಕೂಡಿದ, ಕೇವಲ ಮರಾಠಿ ಬಲದ 'ನವ ಮಹಾರಾಷ್ತ್ರ' ವನ್ನು ಕಟ್ಟುವ ಗಟ್ಟಿತನವನ್ನು ಅವರ ಹೇಳಿಕೆಗಳಿಂದ ಅರಿಯಬಹುದಾಗಿದೆ.
*****
ನಮ್ಮ ಕರ್ನಾಟಕವನ್ನು ಸಹ ಇದುವರೆಗೆ ಆಳಿದವರು, ಈಗ ಆಧಿಕಾರದಲ್ಲಿರುವವರು ನಮ್ಮ ನಾಡಿನ ಹಿತಕಾಯುವ ಕಾಯಕವೇ ಇಲ್ಲಿ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುವವರ ಆಧ್ಯ ಕರ್ತವ್ಯ ಎಂದು ಮನಗಾಣದೆ, ಸುಭದ್ರ-ಸಮೃದ್ಧ ಕನ್ನಡ ನಾಡು ಕಟ್ಟುವೆಡೆ ಗಮನ ಹರಿಸದೆ, ಕೇಂದ್ರದದವರ ಅಡಿಯಾಳು, ಆಡಿಸಿಕೊಳ್ಳುವ ಗೊಂಬೆಗಳಾಗಿ, ಪೊಳ್ಳು ರಾಷ್ಟ್ರೀಯತೆಯ ಸೋಗಿನಲ್ಲಿ ಮುಳುಗಿ ಹೋಗಿ, ತಮ್ಮತನ ಮತ್ತು ಬದ್ಧತೆಯನ್ನು ಮರೆತು ಎಲ್ಲಾ ರೀತಿಯಲ್ಲೂ ಕನ್ನಡ-ಕನ್ನಡಿಗ-ಕರ್ನಾಟಕ ದ ಹಿತಚಿಂತನೆಯನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ.ಬರುವ ಅಕ್ಟೋಬರ್ ೧೩ ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಉಮೇದುವಾರರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನೆನ್ನೆಗೆ ಮುಗಿದಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಪ್ರಬಲವಾಗಿ ಬೇರೂರುವ ಲಕ್ಷಣ ತೋರುತ್ತಿರುವ ಪಕ್ಷವೊಂದನ್ನು ಹೊರತು ಪಡಿಸಿ! ಮಿಕ್ಕೆಲ್ಲಾ ಪಕ್ಷಗಳು, ಅದರ ಮುಖಂಡರು, ಅವರ ಸ್ಪರ್ಧಿಗಳಿಂದ ಅಲ್ಲಿನ ಎಲ್ಲಾ ಮತದಾರರನ್ನು (ಸ್ಥಳೀಯ ಮರಾಠರು ಮತ್ತು ಮರಾಠೇತರ ವಲಸಿಗರ) ಯಾವುದೇ ರೀತಿಯಲ್ಲಾದರೂ ಒಲಿಸಿಕೊಂಡು, ಹೇಗಾದರೂ ಮಾಡಿ ತಮ್ಮ ಪಕ್ಷಕ್ಕೆ ಮತ ಪಡೆದುಕೊಂಡು ಅಧಿಕಾರಕ್ಕೆ ಬರುವ ಕಸರತ್ತು ನಡೆದಿದೆ.
ಹೌದು, ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಮ.ನ.ಸೇ.) ಮಿಕ್ಕೆಲ್ಲಾ ಪಕ್ಷಗಳಿಗಿಂತ ಭಿನ್ನವಾಗಿ ಕೇವಲ ಸ್ಥಳೀಯ ಮರಾಠಿಗರು ಮತ್ತು ಅವರ ಮತಗಳ ಮೇಲೆ ಮಾತ್ರ ವಿಶ್ವಾಸವಿರಿಸಿ ಚುನಾವಣ ಕಣಕ್ಕಿಳಿದಿದೆ. ಬಹಳ ದಿನಗಳ ನಂತರ ರಾಜ್ ಠಾಕ್ರೆ, ರಾಷ್ಟ್ರೀಯ! ಇಂಗ್ಲೀಷ್ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಭಾಗ ೧ ಮತ್ತು ಭಾಗ ೨(ಸಂದರ್ಶಕ ಇಂಗ್ಲೀಷ್ ನಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಮರಾಠಿಯಲ್ಲೆ ಉತ್ತರಿಸುತ್ತ) ಮಾತನಾಡುತ್ತ ತಮ್ಮ ಪಕ್ಷ ಮತ್ತು ಅದರ ನಿಲವು ಹೇಗೆ ಸ್ಥಳೀಯತೆ ಮತ್ತು ಮರಾಠಿಗರ ಹಿತ ಚಿಂತನೆಗೆ ಮಾತ್ರ ಬದ್ಧವಾಗಿದೆಯೆಂಬುದನ್ನು ಖಡಾಖಂಡಿತವಾಗಿ ಸಮರ್ಥಿಸಿಕೊಂಡರು.
ಭಾಷಾವಾರು ಪ್ರಾಂತ್ಯವಾಗಿ ವಿಂಗಡನೆಯಾಗಿರುವ ಭಾರತದಲ್ಲಿ ಅನೇಕತೆಯಲ್ಲಿ ಏಕತೆ ಉಳಿಯಬೇಕಾದರೆ, ಭಾರತ ನಿಜವಾಗಿ ಸಬಲ-ಸದೃಡವಾಗಬೇಕಾದರೆ ಆಯಾ ಪ್ರಾಂತ್ಯಗಳು ಎಲ್ಲಾ ರೀತಿಯಲ್ಲಿ ಬಲಗೊಳ್ಳಬೇಕು. ಅಂತೆಯೇ ಮಹಾರಾಷ್ಟ್ರದಲ್ಲಿ ಸರ್ವ ರೀತಿಯಲ್ಲಿ ಮರಾಠತೆ ಸ್ಥಾಪಿತವಾಗಿ ಅದು ಮಹಾರಾಷ್ಟ್ರವಾಗಿ ಉಳಿಯುವುದೇ ನಿಜವಾದ ರಾಷ್ಟ್ರೀಯತೆ ಮತ್ತು ಭಾರತವೆಂಬ ಹಲವು ಸ್ವತಂತ್ರ್ಯ ಪ್ರಾಂತ್ಯಗಳನ್ನೊಳಗೊಂಡ ರಾಷ್ಟ್ರವನ್ನು ರಚಿಸಿರುವುದರಲ್ಲಿನ ಸಾರ್ಥಕತೆ ಹಾಗು ಆ ದೊಡ್ಡ ಶಕ್ತಿಯನ್ನು ಮತ್ತಷ್ಟು ಬಲ ಪಡಿಸುವ ಸಾಧನ ಎಂಬ ಸ್ಪಷ್ಟತೆ ಅವರ ಮಾತುಗಳಲ್ಲಿದೆ. ಅವರ ಮಾತುಗಳಲ್ಲಿ ಇತರರಂತೆ ಬೂಟಾಟಿಕೆಯ ರಾಷ್ಟ್ರೀಯತೆಯ ಪ್ರತಿಪಾದನೆಯಿಲ್ಲ. ಆ ರೀತಿ ಬೂಟಾಟಿಕೆ ಪ್ರತಿಪಾದನೆ ಮಾಡಿ ಓಟುಗಳನ್ನು ಪಡೆದು ಚುನಾವಣೆ ಗೆಲ್ಲುವ ಇರಾದೆ ಅವರ ಮಾತುಗಳಲ್ಲಿ ಕಾಣಸಿಗುವುದಿಲ್ಲ. ಮರಾಠಿ ಮತದ ಬಲ ಏನೆಂದು ಸಾಬೀತು ಮಾಡುವ ಛಲ ಅವರಿಂದ ಹೊರಹೊಮ್ಮಿರುವುದನ್ನು ಕಾಣಬಹುದಾಗಿದೆ.
ಒಂದು ರಾಜ್ಯದ-ಪ್ರದೇಶದ, ಆಗು-ಹೋಗುಗಳನ್ನು ನಿರ್ದರಿಸುವವರು ಅಲ್ಲಿಯ ಸ್ಥಳೀಯರಾಗಿರಬೇಕು, ಆದರೆ ಮಹಾರಾಷ್ಟ್ರ ರಾಜ್ಯ ಸರ್ಕಾರ ರಚಿಸಲು ಇಂದು ವಲಸಿಗರ ಮತಗಳು ನಿರ್ಣಾಯಕವಾಗುವ ಹಂತ ತಲುಪಿದೆ. ಕೆಲಸ, ವ್ಯಾಪಾರ ಮತ್ತೊಂದನ್ನು ಅರಸಿ ಬರುವ ವಲಸಿಗರು ಎಂದೆಂದಿಗೂ ವಲಸಿಗರಾಗೆ ಉಳಿಯುತ್ತಿರುವುದು ಸಮಸ್ಯೆ. ಪರಿಹಾರವಾಗಿ ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಬರುವವರಿಗೆ ರಹದಾರಿ ಪತ್ರ ಕ್ರಮ ಅನುಸರಿಸುವುದರ ಅವಶ್ಯಕತೆಯ ಬಗ್ಗೆ ಸಹ ರಾಜ್ ಮಾತನಾಡಿದ್ದಾರೆ. ಭಾರತದಿಂದ ಮಹಾರಾಷ್ಟ್ರ ಪ್ರತ್ಯೇಕವಾಗಬೇಕೆಂಬ ವಾದ ನಮ್ಮದಲ್ಲ, ಮಹಾರಾಷ್ಟ್ರದಲ್ಲಿ ಮರಾಠಾತತೆಗೆ ಪ್ರಾಧಾನ್ಯತೆ ದೊರಕಿಸುವ, ಮರಾಠಿಗರ ಹಕ್ಕಿನ ಪರವಾದ ಹೋರಾಟ ನಮ್ಮದು ಎಂಬುದು ರಾಜ್ ಮಾತುಗಳಲ್ಲಿ ಕೇಳಿಬರುತ್ತದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಗಣನೀಯವಾಗಿ ಮ.ನ.ಸೇ.ಯನ್ನು ಬೆಂಬಲಿಸಿರುವುದು ಈ ಮರಾಠಿ ಮತಗಳೆ ಎಂದು ರಾಜ್ ವಿಶ್ವಾಸದಿಂದ ಸಮರ್ಥಿಸಿಕೊಳ್ಳುತ್ತ, ನಮ್ಮ "ಮಹಾರಾಷ್ಟ್ರದಲ್ಲಿ ಮರಾಠತೆ" ಯಲ್ಲಿ ನಂಬಿಕೆಯಿಟ್ಟವರು, ವಲಸಿಗರಾಗಿದ್ದವರು ನೈಜ ರಾಷ್ಟ್ರೀಯತೆಯೆಂದರೆನೆಂದು ಅರಿತವರು ನನ್ನ ಪಕ್ಷಕ್ಕೆ ಮತ ಹಾಕುತ್ತಾರೆ ಮತ್ತು ಇಂತಹ ಮತಗಳು ಮಾತ್ರ ನನಗೆ ಸಾಕು ಎಂಬ ಎಂಬ ಅವರ ಆತ್ಮ ವಿಶ್ವಾಸದಿಂದ ಕೂಡಿದ, ಕೇವಲ ಮರಾಠಿ ಬಲದ 'ನವ ಮಹಾರಾಷ್ತ್ರ' ವನ್ನು ಕಟ್ಟುವ ಗಟ್ಟಿತನವನ್ನು ಅವರ ಹೇಳಿಕೆಗಳಿಂದ ಅರಿಯಬಹುದಾಗಿದೆ.
*****
ಕನ್ನಡಿಗರಿಗಾಗಿ, ಕನ್ನಡಕ್ಕೋಸ್ಕರ, ಕನ್ನಡಿಗರದೇ ಆದ ಎಡ-ಬಲ-ಕೇಂದ್ರದ ಹಂಗಿಲ್ಲದ ಕೇವಲ ಕನ್ನಡತ್ವದ ಸಿದ್ದಾಂತ ಪ್ರತಿಪಾದಿಸುವ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇಂದು ಹೆಚ್ಚಾಗಿದೆ. ಸಧ್ಯಕ್ಕೆ ಕನ್ನಡದ ಎಲ್ಲಾ ಸಮಸ್ಯೆಗಳಿಗೆ ಹೆಗಲು ಕೊಟ್ಟು, ಎಲ್ಲೆಡೆ ಜನಾಂದೋಲನ ಮೂಡಿಸುವಲ್ಲಿ ಸಫಲರಾಗಿ, ಕನ್ನಡಿಗರ ಆಶಾಕಿರಣವಾಗಿ ಬೇರೂರುತ್ತಿರುವ ಕ.ರ.ವೇ. ಯಂತಹ ಸಂಘಟನೆಗಳು ಈ ನಾಡಿನ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳಗುವಲ್ಲಿ ಸಹ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕಿದೆ. ಕನ್ನಡ ನಾಡು-ನುಡಿ ಪರವಾದ ಪ್ರಾಮಾಣಿಕ ಯುವ ಸಂಘಟನೆಯನ್ನು ಬೆಂಬಲ ಕೊಟ್ಟು ಬೆಳೆಸುವತ್ತ ಇಡೀ ಕನ್ನಡ ಸಮುದಾಯ ಕಂಕಣ ತೊಡಬೇಕಿದೆ.
****